Home / State News / Post

ಬಿಜೆಪಿ ಭದ್ರಕೋಟೆಯ ಕದ ತೆಗೆಯುವವರು ಯಾರು

author2
  • Thu Apr 25 2024
thumb

ಬೆಳಗಾವಿ ಲೋಕಸಭೆ ಪ್ರಭಾವಿ ರಾಜಕಾರಣಿಗಳ ತವರು. ಸರ್ಕಾರವನ್ನು ಉಳಿಸುವ ಮತ್ತು ಉರುಳಿಸುವ ಎರಡು ಶಕ್ತಿ ಇರುವ ಜಿಲ್ಲೆ. ಇಲ್ಲಿ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿದ್ದರೆ ಬಿಜೆಪಿ ಮೂರು ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಿದೆ. ಗಡಿ ಜಿಲ್ಲೆಯಲ್ಲಿ ಗಳಿಸಿದ್ದ ಸ್ಥಾನವನ್ನು ಉಳಿಸಿಕೊಳ್ಳಲು ಕೇಸರಿ ಪಕ್ಷ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಿದೆ.


bannerImg

ಬೆಳಗಾವಿ ಕ್ಷೇತ್ರದಲ್ಲಿ 68 ವಯಸ್ಸಿನ ಶೆಟ್ಟರ್ ಮುಖ್ಯಮಂತ್ರಿಯಾಗಿ, ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಅಭ್ಯರ್ಥಿ 31 ವರ್ಷದ ಮೃಣಾಲ್ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಮರಾಠಿ ಭಾಷಿಕರು ಸಂಖ್ಯೆ ಹೆಚ್ಚಾಗಿದ್ದು ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಮತದಾರರು ಹೆಚ್ಚಾಗಿದ್ದಾರೆ ನಂತರದಲ್ಲಿ ಅಲ್ಪಸಂಖ್ಯಾತರು, ಲಿಂಗಾಯಿತರು ಹೆಚ್ಚಾಗಿದ್ದಾರೆ. ಬಿಜೆಪಿಯ ಜಾರಕಿಹೊಳಿ ಸಹೋದರರಾದ ರಮೇಶ್ ಮತ್ತು ಬಾಲಚಂದ್ರ ಅವರು ಶೆಟ್ಟರ್ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದು ಹಾಗೆಯೇ ಶೆಟ್ಟರ್ ಎಲ್ಲರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದ್ದಾರೆ ಇದರ ಮಧ್ಯೆ ಸಚಿವರ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನಿಗೆ ಲಿಂಗಾಯತ ಸಮುದಾಯ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತದೆ ಎನ್ನುವುದು ಸದ್ಯದ ಪ್ರಶ್ನೆ. ಹೀಗಾಗಿ ಕಾಂಗ್ರೆಸ್ಗೆ ಒಳ ಏಟಿನ ಭೀತಿ ಎದುರಾಗಿದ್ದು ಇದನ್ನು ಬಳಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಅಂತಿಮವಾಗಿ ಬೆಳಗಾವಿಯ ಕುಂದ ಸಿಹಿ ಯಾರಿಗೆ ಸಿಗುತ್ತದೆ ಎನ್ನುವುದೇ ಕುತೂಹಲ. ಕ್ಷೇತ್ರದಲ್ಲಿ ಒಟ್ಟು 19,04,099 ಮತದಾರರಿದ್ದು , ಇದರಲ್ಲಿ 9,48,282 ಪುರುಷರು ಮತ್ತು 9,55,725 ಮಹಿಳೆಯರಿದ್ದಾರೆ. ಪುರುಷ ಮತದಾರರಿಗಿಂತ 7,443 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

thumb
thumb
thumb
bannerImg