Home / State News
thumb

ಬಿಜೆಪಿ ಭದ್ರಕೋಟೆಯ ಕದ ತೆಗೆಯುವವರು ಯಾರು

ಬೆಳಗಾವಿ ಲೋಕಸಭೆ ಪ್ರಭಾವಿ ರಾಜಕಾರಣಿಗಳ ತವರು. ಸರ್ಕಾರವನ್ನು ಉಳಿಸುವ ಮತ್ತು ಉರುಳಿಸುವ ಎರಡು ಶಕ್ತಿ ಇರುವ ಜಿಲ್ಲೆ. ಇಲ್ಲಿ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿದ್ದರೆ ಬಿಜೆಪಿ ಮೂರು ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಿದೆ. ಗಡಿ ಜಿಲ್ಲೆಯಲ್ಲಿ ಗಳಿಸಿದ್ದ ಸ್ಥಾನವನ್ನು ಉಳಿಸಿಕೊಳ್ಳಲು ಕೇಸರಿ ಪಕ್ಷ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಿದೆ.

ಹೆಚ್ಚಿನ ಮಾಹಿತಿ
thumb

ಸರ್ಕಾರ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ...

ಬೆಂಗಳೂರು: ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲ‌ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ನಾಯಕರು ಮನವಿ‌ ಸಲ್ಲಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಆರ್.‌ಅಶೋಕ್ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಬಂಧಿಸಿ ಎಂದು ಆಗ್ರಹಿಸಿದರೆ ಸರ್ಕಾರ ಅವರನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಸೂಚಿಸಿದೆ ಎಂದು ದೂರಿದರು.

ಹೆಚ್ಚಿನ ಮಾಹಿತಿ
thumb

111

111

ಹೆಚ್ಚಿನ ಮಾಹಿತಿ
thumb

ಶಾಸಕರ ಮೇಲೆ FIR ದಾಖಲು: ಸದನದಲ್ಲಿ ಕೋಲಾಹಲ

ಬೆಂಗಳೂರು: ಶಾಲೆಯೊಂದರಲ್ಲಿ ಶ್ರೀರಾಮನಿಗೆ ಅವಮಾನ ಮಾಡಿರುವ ಕುರಿತು ನಡೆದ ಪ್ರಕರಣದಲ್ಲಿ ಮಂಗಳೂರು ಉತ್ತರ ಶಾಸಕ ಶಾಸಕ ಭರತ್ ಶೆಟ್ಟಿ ಮೇಲೆ ದೂರು ದಾಖಲಾಗಿದ್ದು, ಸದನದಲ್ಲಿ ಕದನಕ್ಕೆ ಕಾರಣವಾಯ್ತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಭರತ್ ಅವರು, ತಾವು ಸ್ಥಳದಲ್ಲಿ ಇಲ್ಲದಿದ್ದರೂ ತಮ್ಮ ಮೇಲೆ ಎಫ್ ಐ ಆರ್ ಹಾಕಲಾಗಿದೆ. ಸದನದಲ್ಲಿ ಇರುವಾಗಲೇ ಈ ರೀತಿಯಾಗಿದೆ. ತಮ್ಮ ಸಹಾಯಕ್ಕೆ ಸ್ಪೀಕರ್ ಆಗಮಿಸಬೇಕು ಅಲ್ವಾ ಎಂದು ಪ್ರಶ್ನಿಸಿದರು.

ಹೆಚ್ಚಿನ ಮಾಹಿತಿ
thumb

ಗೂಂಡಾಗಿರಿಗೆ ಹೆದರಲ್ಲ: ಸಿದ್ದರಾಮಯ್ಯ

ಬೆಂಗಳೂರು: ಏನು ಗೂಂಡಾಗಿರಿ ಮಾಡ್ತೀರಾ? ನಾನು ಯಾವುದಕ್ಕೂ ಹೆದರಲ್ಲ, 7 ಕೋಟಿ ಜನರು ನೋಡ್ತಾ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ವಿಧಾನ ಪರಿಷತ್​ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸುವಾಗ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಕೂಡ ವಿರೋಧಿ ಧೋರಣೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಸಿಎಂ ಉತ್ತರ ಬೇಡ ಎಂದು ಬಿಜೆಪಿ ಸದಸ್ಯರ ಘೋಷಣೆ ಮಾಡಿದರು.

ಹೆಚ್ಚಿನ ಮಾಹಿತಿ
thumb

ಟಿಎಂಸಿಗೆ ಗುಡ್ ಬೈ ಹೇಳಿದ ಸಂಸದೆ

ಕೋಲ್ಕತ್ತಾ: ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಜಾದವ್‌ಪುರ ಕ್ಷೇತ್ರವನ್ನು ಗೆದ್ದು ಸಂಸತ್ ಪ್ರವೇಶಿಸಿದ್ದ ಅವರು ತಮ್ಮ ರಾಜೀನಾಮೆಯನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಹಸ್ತಾಂತರಿಸಿದ್ದಾರೆ. ಆದರೆ ಇದು ಇನ್ನೂ ಅಂಗೀಕರವಾಗಿಲ್ಲ.

ಹೆಚ್ಚಿನ ಮಾಹಿತಿ
thumb

ನಾನು ಸಿಂಗಲ್ ಸ್ಟಾರ್ :ಅಶೋಕ್

ಬೆಂಗಳೂರು: ಇಂದು ಸದನದಲ್ಲಿ‌ ಸ್ವಾರಸ್ಯಕರವಾದ ಘಟನೆಯೊಂದು ನಡೆಯಿತು. ಸದನದ ಕೊನೆಗೆ ಮತ್ತೆ ಶಾಸಕರ ಮೇಲೆ‌ ಎಫ್ ಐ ಆರ್ ಹಾಕಿದ ಪ್ರಕರಣ ಚರ್ಚೆಗೆ ಬಂತು. ಈ ವೇಳೆ ವಿಪಕ್ಷ ನಾಯಕ‌ ಆರ್. ಅಶೋಕ್ ಅವರು ಮಾತನಾಡಿ, 'ನಾನು ಹೋಂ ಮಿನಿಸ್ಟರ್ ಆಗಿದ್ದಾಗ ಕಾಲ್ ಬಂದಿತ್ತು. ಅದಕ್ಕೆ‌ ಬಗ್ಗಲಿಲ್ಲ.. ಮಂಗಳೂರಿನಲ್ಲಿ ಬಾರ್ ಒಂದರಲ್ಲಿ ಗಲಾಟೆ ಮಾಡಿದ್ದ ಯುವಕ ಮೇಲೆ ಪ್ರಕರಣ ದಾಖಲಿಸಿದೆ ಎಂದು ಉದಾಹರಣೆ ನೀಡಿದರು.

ಹೆಚ್ಚಿನ ಮಾಹಿತಿ
thumb

ದೇವೆಗೌಡರನ್ನು ಹುಡುಕಿಕೊಡಿ - ಅಣಕಿಸಿದ ಕಾಂಗ್ರೆಸ್

ಬೆಂಗಳೂರು : ಇದೇ 25 ವರ್ಷಗಳ ಹಿಂದೆ ಆರ್‌ಎಸ್‌ಎಸ್‌ ಬಿಜೆಪಿ ವಿರುದ್ಧ ತೊಡೆತಟ್ಟಿದ್ದ ಜೆಡಿಎಸ್‌ ವರಿಷ್ಠ ಹೆಚ್‌ ಡಿ ದೇವೆಗೌಡರು ಈಗ ಅದೇ ಸಂಘಟನೆ ಜೊತೆ ಕೈಜೋಡಿಸಿದ್ದಾರೆ, ಆಗಿದ್ದ ದೇವೆಗೌಡರು ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್‌ ಟ್ವೀಟ್ ಮೂಲಕ ಅಣಕಿಸಿದೆ.

ಹೆಚ್ಚಿನ ಮಾಹಿತಿ
thumb

ಜನರನ್ನು ಕೆರಳಿಸುವುದು ಬಿಜೆಪಿ ಗುಣ: ಈಶ್ವರ ಖಂಡ್ರೆ

ಕಲ್ಬುರ್ಗಿ: ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಲಾಭ ಮಾಡಿಕೊಳ್ಳುವುದು, ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುವುದು ಬಿಜೆಪಿಯ ಗುಣ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು. ನಾನು ಕರಸೇವಕ ನನ್ನನ್ನು ಅರೆಸ್ಟ್ ಮಾಡಿ ಎನ್ನುವ ಬಿಜೆಪಿ ಅಭಿಯಾನಕ್ಕೆ ಕಲ್ಬುರ್ಗಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಷ ಬೀಜ ಬಿತ್ತುವ ಬಿಜೆಪಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.

ಹೆಚ್ಚಿನ ಮಾಹಿತಿ
thumb

ಗೋದ್ರಾ ಹತ್ಯಾಕಾಂಡ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಂಸದ ಡಿಕೆ ಸುರೇಶ್‌

ರಾಮನಗರ: ರಾಮಮಂದಿರಕ್ಕೂ ರಕ್ಷಣೆ ಬೇಕು, ಭಕ್ತರಿಗೂ ರಕ್ಷಣೆ ಕೊಡಬೇಕು. ಏನೇ ಇದ್ರೂ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಗೋದ್ರಾ ಮಾದರಿ ಮತ್ತೊಂದು ದುರಂತ ಸಂಭವಿಸಬಹುದು ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಯನ್ನು ಸಂಸದ ಡಿ.ಕೆ.ಸುರೇಶ್ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ಅಯೋಧ್ಯೆ ವಿವಾದಾತ್ಮಕ ಕ್ಷೇತ್ರ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗಿದೆ. ಆ ದೃಷ್ಟಿಯಿಂದ ಹರಿಪ್ರಸಾದ್ ಅವರು ಹೇಳಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿ
thumb

ಬಿಜೆಪಿ ವಕ್ತಾರರು, ಸಂಚಾಲಕರುಗಳ ನೇಮಕ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಂಡ್‌ ಟೀಮ್‌ಗೆ ಮತ್ತಷ್ಟು ಹೊಸ ಪದಾಧಿಕಾರಿಗಳ ನೇಮಕವಾಗಿದ್ದು, ಬಿಜೆಪಿ ಮುಖ್ಯ ವಕ್ತಾರರು ಮತ್ತು ವಕ್ತಾರರು ಹಾಗೂ ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕ, ಸಹಸಂಚಾಲಕರನ್ನು ನೇಮಿಸಲಾಗಿದೆ. ಬಿಜೆಪಿ ಮುಖ್ಯ ವಕ್ತಾರರಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವಥ್‌ ನಾರಾಯಣ ಅವರನ್ನು ನೇಮಿಸಲಾಗಿದ್ದರೆ. ವಕ್ತಾರರಾಗಿ ಹರಿಪ್ರಕಾಶ್‌ ಕೋಣೆಮನೆ, ಛಲವಾದಿ ನಾರಾಯಣಸ್ವಾಮಿ, ಡಾ. ತೇಜಸ್ವಿನಿ ಗೌಡ, ಕೆ.ಎಸ್.‌ ನವೀನ್‌, ಎಂ.ಜಿ. ಮಹೇಶ್‌, ಎಚ್‌.ಎನ್‌. ಚಂದ್ರಶೇಖರ್‌, ಡಾ. ನರೇಂದ್ರ ರಂಗಪ್ಪ, ಕು. ಸುರಭಿ ಹೊದಿಗೆರೆ, ಅಶೋಕ್‌ ಎಂ.ಕೆ. ಗೌಡ ಹಾಗೂ ಎಚ್‌.ವೆಂಕಟೇಶ್‌ ದೊಡ್ಡೇರಿ ಅವರುಗಳನ್ನು ನೇಮಿಸಲಾಗಿದೆ.

ಹೆಚ್ಚಿನ ಮಾಹಿತಿ
thumb

ಆರ್‌. ಅಶೋಕ್‌ ಮನೆ ಮುಂದೆ ಪ್ರತಿಭಟನೆ ಎಚ್ಚರಿಕೆ

ಬೆಂಗಳೂರು: ಬೀದಿ ಬದಿಯಲ್ಲಿ ಕಸಗುಡಿಸುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರ ವಂಚನೆ ‍ ಎಸಗಿರುವ ಘಟನೆ ವಿಪಕ್ಷ ನಾಯಕ ಆರ್‌. ಅಶೋಕ್‌ ಕ್ಷೇತ್ರದಲ್ಲಿ ನಡೆದಿದೆ. ಪದ್ಮನಾಭನಗರದ ಗಣೇಶ ಮಂದಿರ ವಾರ್ಡ್‌ ನಲ್ಲಿ 134 ಮಂದಿ ಪೌರಕಾರ್ಮಿಕರಿಗೆ ವಂಚನೆಯಾಗಿದ್ದು ಆರೋಪಿಯ ವಿರುದ್ದ ದೂರು ದಾಖಲಿಸಲಾಗಿದೆ.

ಹೆಚ್ಚಿನ ಮಾಹಿತಿ
thumb

ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ 'ಯುವನಿಧಿ' ನೋಂದಣಿಗೆ 'CM ಸಿದ್ದರಾಮಯ್ಯ' ಅಧಿಕೃತ ಚಾಲನೆ

ಬೆಂಗಳೂರು : ಡಿಪ್ಲೊಮಾ, ಪದವೀಧರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಯುವನಿಧಿ ನೋಂದಣಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಿದರು.ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿ
thumb

ಸರ್ಕಾರದಿಂದ ಕುಡಿಯುವ 'ನೀರಿನ ತೆರಿಗೆ' ಹೆಚ್ಚಳ

ಬೆಂಗಳೂರು : ರಾಜ್ಯದ ಜನತೆಗೆ ವಾಟರ್ ಶಾಕ್ ಎದುರಾಗಿದ್ದು, ಸರ್ಕಾರ ಕುಡಿಯುವ ನೀರಿನ ತೆರಿಗೆ ಹೆಚ್ಚಳ ಮಾಡಿದೆ. ಕೈಗಾರಿಕೆಗಳಿಗೆ ಕೆರೆ, ನಾಲೆ, ಜಲಾಶಯಗಳಿಂದ ಒದಗಿಸುವ ನೀರಿನ ಕರ ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಪ್ರತಿ ಎಂಸಿಎಫ್ಟಿ ನೀರಿಗೆ ಇದೆ ಸದ್ಯದ 50,000 ರೂ. ರಾಜಧನ, ಇದನ್ನು 3 ಲಕ್ಷ ರೂ.ಗೆ ಹೆಚ್ಚಿಸಲು ಸಂಪುಟ ಸಭೆ ತೀರ್ಮಾನ ಮಾಡಿದೆ.

ಹೆಚ್ಚಿನ ಮಾಹಿತಿ
thumb

ಬೆಂಗಳೂರಿನಲ್ಲಿ ಹರಡಿದ 'ಕ್ರಾನಿಕ್ ಕಾಫ್'

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಕಡೆ ಕೋವಿಡ್ ಆತಂಕ ಮನೆ ಮಾಡಿದರೆ, ಇನ್ನೊಂದು ಕಡೆ ಹಲವು ಜನರಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಶೇ.30-35 ರಷ್ಟು ಮಂದಿಗೆ ಕ್ರಾನಿಕ್ ಕಾಫ್ ಹರಡಿದೆ ಎಂದು ಹೇಳಲಾಗಿದೆ. ಮಹಾಮಾರಿ ಕೋವಿಡ್ ಭೀತಿ ನಡುವೆ ಈ 'ಕ್ರಾನಿಕ್ ಕಾಫ್' ಎಂದು ಹೇಳಲಾಗಿರುವ ಈ ಕೆಮ್ಮು ವೇಗವಾಗಿ ಗಾಳಿಯಲ್ಲಿ ಹರಡುತ್ತಿದೆ . ಅದರಲ್ಲೂ ಮಕ್ಕಳಲ್ಲಿ ಹಾಗೂ ವೃದ್ದರಲ್ಲಿ ಈ ಕೆಮ್ಮು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕೆಮ್ಮು ಎಂದು ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಕೆಮ್ಮುವಿನ ಜೊತೆ ವೈರಲ್ ಇನ್ಪೆಕ್ಷನ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿದ್ದು, ಎಲ್ಲರೂ ಮಾಸ್ಕ್ ಧರಿಸೋದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದಾರೆ.ವಾಹನಗಳ ತೀವ್ರ ಧೂಳು, ಹೊಗೆಯಿಂದ ಈ ತರಹದ ಕೆಮ್ಮುಗಳು ಬರುತ್ತದೆ ಎಂದು ಹೇಳಲಾಗಿದೆ.

ಹೆಚ್ಚಿನ ಮಾಹಿತಿ
thumb

'ಬಜೆಟ್ ಅಧಿವೇಶನ' ನಡೆಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿಯಲ್ಲಿ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಮುಂದಿನ ವಿಧಾನ ಮಂಡಲ ಮತ್ತು ಬಜೆಟ್ ಅಧಿವೇಶನವನ್ನು ಫೆಬ್ರವರಿಯಲ್ಲಿ ನಡೆಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.

ಹೆಚ್ಚಿನ ಮಾಹಿತಿ
thumb

ಸ್ಟಾಂಪ್‌ ಡ್ಯೂಟಿ ಹೆಚ್ಚಳ:ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ : ನೋಂದಣಿ ರಹಿತ ವ್ಯವಹಾರಗಳಿಗೆ ಮಾತ್ರ ಸ್ಟಾಂಪ್‌ ಡ್ಯೂಟಿ ಹೆಚ್ಚಳ ಅನ್ವಯವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇದರಿಂದಾಗಿ ಆತಂಕದಲ್ಲಿದ್ದ ಆಸ್ತಿದಾರರು, ರಿಯಲ್‌ ಎಸ್ಟೇಟ್‌ ದಳ್ಳಾಳಿಗಳು, ವರ್ತಕರು ನಿಟ್ಟುಸಿರು ಬಿಡುವಂತಾಗಿದೆ. ಬೆಳಗಾವಿಯ ಅಧಿವೇಶನದಲ್ಲಿ ಕರ್ನಾಟಕ ಸ್ಟಾಂಪ್‌ ತಿದ್ದುಪಡಿ ವಿಧೇಯಕ- 2023 ನ್ನು ಮಂಡಿಸಲಾಗಿತ್ತು. ಈ ಕುರಿತು ವಿವರಣೆ ನೀಡಿರುವ ಕೃಷ್ಣ ಬೈರೇಗೌಡ, ಜನಸಾಮಾನ್ಯರ ಎಲ್ಲಾ ವ್ಯವಹಾರಗಳಿಗೂ ಕಾನೂನಿನ ಭದ್ರತೆ ಮತ್ತು ರಕ್ಷಣೆ ನೀಡುವ ಸಲುವಾಗಿಯೇ ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಮಾಹಿತಿ
thumb

ಯು.ಟಿ. ಖಾದರ್‌ ಅವಹೇಳನೆ -ಎಸ್‌ಡಿಪಿಐ ಮುಖಂಡ ಅರೆಸ್ಟ್‌ !

ಮಂಗಳೂರು: ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡ ಆರೋಪದ ಮೇಲೆ ಎಸ್‌ಡಿಪಿಐ ಮುಖಂಡನೊಬ್ಬನನ್ನು ಸೈಬರ್‌ ಕ್ರೈಮ್‌ (Cyber crime) ಅಧಿಕಾರಿಗಳು ಬಂಧಿಸಿದ್ದಾರೆ. ರಿಯಾಜ್‌ ಕಡಂಬು ಬಂಧಿತ ಆರೋಪಿಯಾಗಿದ್ದು, ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೋ ತೆರವು ಗೊಳಿಸುವ ವಿಚಾರದ ಬಗ್ಗೆ ಯು.ಟಿ.ಖಾದರ್‌ ನೀಡಿದ್ದ ಹೇಳಿಕೆಯನ್ನು ರಿಯಾಜ್‌ ಅವಹೇಳನ ಮಾಡಿದ್ದ.

ಹೆಚ್ಚಿನ ಮಾಹಿತಿ
thumb

ರಮೇಶ ಜಾರಕಿಹೊಳಿ ಪ್ರಕರಣ ಮರು ತನಿಖೆಗೆ ಸಿದ್ಧತೆ?

ಬೆಳಗಾವಿ: ಸದನದಲ್ಲಿ ಗಂಭೀರ ವಿಷಯಗಳ ಕುರಿತು ಚರ್ಚಿಸದ ಬಿಜೆಪಿ ಶಾಸಕರು ಹೊರಗಡೆ ಬಂದು ಹೋರಾಟ ಮಾಡುತ್ತೇನೆ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ ಟೀಕಿಸಿದರು. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸದನದಲ್ಲಿ ಚರ್ಚೆ ಮಾಡಲು ಸಾಕಷ್ಟು ವಿಷಯಗಳಿವೆ. ಬಿಜೆಪಿಯವರು ನಮ್ಮ ಸರ್ಕಾರದ ಲೋಪದೋಷಗಳ ಕುರಿತು ಚರ್ಚಿಸಬಹುದು. ರಾಜ್ಯದಲ್ಲಿ ತೀವ್ರ ಬರ ಇದೆ, ಉತ್ತರ ಕರ್ನಾಟಕದಲ್ಲೂ ಸಾಕಷ್ಟು ಸಮಸ್ಯೆಗಳಿವೆ.

ಹೆಚ್ಚಿನ ಮಾಹಿತಿ
thumb

ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ಬೆಳಗಾವಿ, ನೋಟಿಸ್ ವಿಚಾರದಲ್ಲಿ ತಾರತಮ್ಯ ಮಾಡಬಾರದಿತ್ತು. ನಾನು ಒಬ್ಬ ಹಿಂದುಳಿದವನು ಅಂತಾ ನೋಟಿಸ್ ಕೊಡುತ್ತೀರಾ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ತಮಗೆ ಮಾತ್ರ ನೋಟಿಸ್ ಕೊಟ್ಟಿರುವ ವಿಚಾರವಾಗಿ ಮಾತನಾಡಿದರು. ಈ ಹಿಂದೆ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮುಂದೆಯೂ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ ಹರಿಪ್ರಸಾದ್, ಕೆಲವರು ಹೈಕಮಾಂಡ್ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಾರೆ. ನಾನು ಯಾವತ್ತು ಹೈಕಮಾಂಡ್ ನಿರ್ಧಾರ ಪ್ರಶ್ನೆ ಮಾಡಿದವನಲ್ಲ. ಕೆಲವರು ಕುತಂತ್ರ ಮಾಡಿದಾಗ ಅದನ್ನ ಪ್ರಶ್ನೆ ಮಾಡುತ್ತೇನೆ ಎಂದರು. ಅಲ್ಲದೆ, ನನ್ನ ನೋಟಿಸ್​ಗೆ ನಾನು ಉತ್ತರ ಕೊಟ್ಟಾಗಿದೆ. ಬಳಿಕ ಎರಡು ಸಿಡಬ್ಲ್ಯೂಸಿ ಸಭೆಯಲ್ಲೂ ಭಾಗಿಯಾಗಿದ್ದೇನೆ. ಆದರೆ ಇವರು ಮಾಡುತ್ತಾ ಇರುವುದೇನು? ಇವರಿಗೆ ಯಾರು ಸ್ವಾತಂತ್ರ್ಯ ಕೊಟ್ಟಿಲ್ಲ. ಮನಸ್ಸಿಗೆ ಬಂದ ಹಾಗೆ ಇವರು ಮಾಡಲು ಆಗಲ್ಲ. ಪಕ್ಷದ ನಿಯಮ ಇದೆ ಅದರ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಒಂದು ಹಂತ ಇದೆ ಅಲ್ಲಿವರೆಗೂ ತಡೆದುಕೊಳ್ಳುತ್ತೇವೆ. ಅದಾದ ಬಳಿಕ ಭಾರಿ ಕಷ್ಟ ಆಗುತ್ತದೆ ಎಂದರು. ರಾಜಕಾರಣದಲ್ಲಿ ನನಗೆ ಯಾವತ್ತೂ ವಿಪಕ್ಷದಿಂದ ತೊಂದರೆ ಆಗಿಲ್ಲ: ಬಿಕೆ ಹರಿಪ್ರಸಾದ್ ನಾನು ಕಾಂಗ್ರೆಸ್ ಪಕ್ಷದ ಸಿದ್ದಾಂತದ ಬಗ್ಗೆ ನಂಬಿಕೆ ಇಟ್ಟುಕೊಂಡಿರುವವನು. ನಾನು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇಟ್ಟುಕೊಂಡವನು. ಅದರಲ್ಲಿ ಗೌಡ್ರು, ಲಿಂಗಾಯಿತರು, ಬ್ರಾಹ್ಮಣರು, ಎಸ್​ಸಿ ಎಸ್​ಟಿ ಹಿಂದುಳಿದವರು ಎಲ್ಲರೂ ಇರುತ್ತಾರೆ. ನಮ್ಮ ಸಭೆ ಆದ ಬಳಿಕ ಅವರು ಸಾಲು ಸಾಲು ಅಹಿಂದ ಸಮಾರಂಭ ಆಗುತ್ತಿದೆ. ಆದರೆ ನನಗೆ ಅದರಲ್ಲಿ ನನಗೆ ನಂಬಿಕೆ ಇಲ್ಲ. ನಮ್ಮನ್ನ ದೂರ ಇಟ್ಟೇ ಮಾಡುತ್ತಿರುವುದು ಬಹಳ ಸಂತೋಷ. ನಾನು ಕಾಂಗ್ರೆಸ್ ಪಕ್ಚದ ಸಿದ್ಧಾಂತವನ್ನೇ ಹೇಳಿಕೊಂಡು ಹೋಗುತ್ತೇನೆ ಎಂದರು.

ಹೆಚ್ಚಿನ ಮಾಹಿತಿ
thumb
thumb
bannerImg